ತಿದ್ದುಪಡಿ ಪ್ರಸ್ತಾವನೆಯ ಸಲ್ಲಿಕೆ

ಈಗಾಗಲೇ ಅನುಮೋದನೆಗೊಂಡ ಯೋಜನೆಗೆ ತಿದ್ದುಪಡಿಯ ಅಗತ್ಯತೆ ಇದೆ ಎಂದು ಯೋಜನೆಯ ಪ್ರಸ್ತಾಪದಾರರಿಗೆ ಅನಿಸಿದಲ್ಲಿ ಉದಾ: ಕಾಲಾವಧಿಯ ವಿಸ್ತರಣೆ, ಸ್ಥಳ ಬದಲಾವಣೆ ಮುಂತಾದವು ಆಗ.  ಇಲ್ಲಿ ಕ್ಲಿಕ್ ಮಾಡಿ.

• ಕಂಪನಿಯ ಹೆಸರನ್ನು ಹೆಸರಿಸಿ, `ಸರ್ಚ್’ ಮೇಲೆ ಕ್ಲಿಕ್ ಮಾಡಿ. ಚೆಕ್ ಬಾಕ್ಸ್ ಆಯ್ಕೆ ಮಾಡಿ ಮತ್ತು ಬಳಕೆದಾರರ ಐಡಿ (useಡಿiಜ) ಮತ್ತು ಡಿಫಾಲ್ಟ್ ಪಾಸ್‍ವರ್ಡ್ ಪಡೆದುಕೊಳ್ಳಿ.

• ನೋಂದಣಿ ಅರ್ಜಿಯನ್ನು ಭರ್ತಿ ಮಾಡಿ ಮತ್ತು ಪಾಸ್‍ವರ್ಡ್ ಸೃಜಿಸಿ ಮತ್ತು ಯಾವ ರೀತಿಯ ತಿದ್ದುಪಡಿ ಎಂಬುದನ್ನು ಆಯ್ಕೆ ಮಾಡಿ ಮತ್ತು ಅಧಿಕೃತ ವ್ಯಕ್ತಿಯ ವಿವರಗಳನ್ನು ಭರ್ತಿ ಮಾಡಿ, ದಾಖಲೆಗಳನ್ನು ಅಪ್‍ಲೋಡ್ ಮಾಡಿ ಸಲ್ಲಿಸಿ. ವಿವಿಧ ತಿದ್ದುಪಡಿಗಳನ್ನು ಸಹ ಆಯ್ಕೆ ಮಾಡಬಹುದು.

ಹೂಡಿಕೆದಾರರು ಕೆಳಕಂಡ ವಿವಿಧ ಬಗೆಯ ತಿದ್ದುಪಡಿಗಳಿಗೆ ಅರ್ಜಿ ಸಲ್ಲಿಸಬಹುದು.

(i) ಅವಧಿ ವಿಸ್ತರಣೆ (ii) ಚಟುವಟಿಕೆಗಳ ಬದಲಾವಣೆ (iii) ಸಂರಚನೆಯಲ್ಲಿ ಬದಲಾವಣೆ (iv) ಸ್ವಾಧೀನ ವಿಧಾನದಲ್ಲಿ ಬದಲಾವಣೆ (v) ಹೆಚ್ಚುವರಿ ನೀರಿನ ಅಗತ್ಯತೆ (vi) ಹೆಚ್ಚುವರಿ ವಿದ್ಯುತ್ ಅಗತ್ಯತೆ (vii) ಸರ್ಕಾರಿ ಆದೇಶಕ್ಕೆ ತಿದ್ದುಪಡಿ (viii) ಉತ್ಪಾದನಾ ಸಾಮಥ್ರ್ಯದಲ್ಲಿ ಬದಲಾವಣೆ (ix) ಅನುಮೋದನೆಯ ವರ್ಗಾವಣೆ (x) ಗ್ರಾಮ/ಸರ್ವೆ ನಂಬರ್‍ನ ಬದಲಾವಣೆ (xi) ಹೆಚ್ಚುವರಿ ಜಮೀನಿನ ಅಗತ್ಯತೆ (xii) ಸ್ಥಳ/ಸ್ಥಾನದ ಬದಲಾವಣೆ (xiii) ಕಂಪನಿ ಹೆಸರಿನ ಬದಲಾವಣೆ (xiv) ಹೂಡಿಕೆಯಲ್ಲಿ ಬದಲಾವಣೆ (xv ) ಇತರ ತಿದ್ಪುಪಡಿಗಳು.

ಪೂರ್ವಾರ್ಹತೆಗಳು:

• ತಿದ್ದುಪಡಿ ಬಯಸುವ ಪ್ರಸ್ತಾಪದಾರರು ಈ ಮೊದಲು ಯೋಜನೆಗೆ ಮಂಜೂರಾತಿ ನೀಡಿರುವ ಆದೇಶದ ಪ್ರತಿ ಹೊಂದಿರಬೇಕು.

• ಅರ್ಜಿ ಸಲ್ಲಿಕೆಗೆ ಅತ್ಯಂತ ಭದ್ರತೆ ಮತ್ತು ಅಧಿಕೃತದೊಂದಿಗೆ ಡಿಜಿಟಲ್ ಸಹಿಯನ್ನು ಕಡ್ಡಾಯಗೊಳಿಸಿದೆ.

• ಅರ್ಜಿದಾರರು ಡಿಜಿಟಲ್ ಸಹಿ ವಿನ್ಯಾಸವನ್ನು ಅರ್ಜಿ ಸಲ್ಲಿಸಲು/ದಾಖಲೆಗಳನ್ನು ಅಪ್‍ಲೋಡ್ ಮಾಡುವುದಕ್ಕಾಗಿ ಹೊಂದಿರಬೇಕು.

• ಡಿಜಿಟಲ್ ಸಹಿ ಪ್ರಮಾಣ ಪತ್ರ ನೀಡುವ ಪ್ರಮಾಣೀಕೃತ ಪ್ರಾಧಿಕಾರ, ಡಿಜಿಟಲ್ ಸಹಿ ಪ್ರಮಾಣ ಪತ್ರದ ಬೆಲೆ ಕುರಿತು ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.