`ಇಬಿಜ್ ಕರ್ನಾಟಕ’ (ವಿದ್ಯುನ್ಮಾನ ವ್ಯವಹಾರ ಕರ್ನಾಟಕ) ಕುರಿತು

ಕರ್ನಾಟಕಕ್ಕೆ ಸ್ವಾಗತ - ಭವಿಷ್ಯಕ್ಕಾಗಿ ಸ್ವಾಗತ

ರಾಜ್ಯದಿಂದ ಕೇಂದ್ರೀಕೃತ ಪ್ರಯತ್ನಗಳು, ಹೂಡಿಕೆದಾರ ಸ್ನೇಹಿ ಕ್ರಮಗಳು, ವಿಫುಲ ನೈಸರ್ಗಿಕ ಸಂಪನ್ಮೂಲಗಳು, ಸಮರ್ಪಕ ಮೂಲಸೌಕರ್ಯಗಳು, ಗುಣಮಟ್ಟದ ಮಾನವಶಕ್ತಿ ಮತ್ತು ಉದ್ಯಮಶೀಲ ಸ್ಫೂರ್ತಿಯ ಹೂಡಿಕೆದಾರರು ಮುಂತಾದ ಎಲ್ಲ ಸಂಗತಿಗಳು, ಅಂಶಗಳು ಇಂದು ಕರ್ನಾಟಕವು ವಿವಿಧ ರಂಗಗಳಲ್ಲಿ ಕ್ಷಿಪ್ರ ಸಾಧನೆಗೈದು ಹೆಮ್ಮೆಯ ಸ್ಥಾನ ಗಳಿಸಲು ಸಾಧ್ಯವಾಗಿದೆ

ಕರ್ನಾಟಕ - ನಾಯಕತ್ವದೊಂದಿಗೆ ದಾಪುಗಾಲಿಡುತ್ತಿದೆ.

ರಾಜ್ಯ ಇಂದು ದೇಸಿಯ ಬೆಳವಣಿಗೆಗೆ ಒತ್ತು ಕೊಟ್ಟಿದೆ. ಜೀವನವನ್ನು ರೂಪಿಸುತ್ತಿದೆ. ಸಂಪನ್ಮೂಲ ಆಧಾರಿತ, ಕೌಶಲ್ಯಾಧಾರಿತ, ತಂತ್ರe್ಞÁನ ಮತ್ತು e್ಞÁನಾಧಾರಿತ ಉತ್ಪನ್ನಗಳು ಮತ್ತು ಸೇವೆಗಳ ಸಮರ್ಥ ಸಮ್ಮಿಳಿತಗಳ ಮೂಲಕ ಸಿರಿ ಸಂಪತ್ತನ್ನು ಸೃಜಿಸುತ್ತಿದೆ. ಕರ್ನಾಟಕವು ನಿರಂತರ ಬೆಳವಣಿಗೆಗಾಗಿ ತಂತ್ರe್ಞÁನವನ್ನು ಉಪಯೋಗಿಸುವ ಶಾಶ್ವತ ಸಂಪ್ರದಾಯವನ್ನು ಹೊಂದಿದೆ. ಅಲ್ಲದೇ ಆರ್ಥಿಕ ಕ್ಷೇತ್ರದ ವಿವಿಧ ವಲಯಗಳನ್ನು ಸುತ್ತಿ ಅತ್ಯಂತ ಹೆಚ್ಚು ತಂತ್ರe್ಞÁನ ಪ್ರೀತಿಯ ಹಾಜ್ಯವೆಂಬ ಖ್ಯಾತಿಯ ಶಿಖರ ತಲುಪಿದೆ

ಕುಮ್ – ಕರ್ನಾಟಕ ಉದ್ಯೋಗ ಮಿತ್ರ

``ಕರ್ನಾಟಕ ಉದ್ಯೋಗ ಮಿತ್ರ’’ವು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಆಶ್ರಯದಡಿ ರಚಿತವಾದ ಕರ್ನಾಟಕ ಸರ್ಕಾರದ ಒಂದು ಸಂಸ್ಥೆ. ಹೂಡಿಕೆದಾರರು ಬಂಡವಾಳ ಹೂಡಲು ಪ್ರವರ್ತಿಸುವುದು, ಪ್ರೋತ್ಸಾಹಿಸುವುದು ಹಾಗೂ ಸಹಕರಿಸಲು ``ಕರ್ನಾಟಕ ಉದ್ಯೋಗ ಮಿತ್ರ’’ ರಾಜ್ಯದ ಮೊದಲ ಹೆಜ್ಜೆ.
ಬಂಡವಾಳ ಹೂಡಿಕೆಗೆ ಮುಂದಾಗುವುದೆಂದರೆ ಅತ್ಯಂತ ಮಹತ್ವಪೂರ್ಣ ಪ್ರಯಾಣಕ್ಕೆ ಸಿದ್ಧತೆ ಮಾಡುವಷ್ಟೇ ಪ್ರಮುಖವಾದುದು. ಸಹಜವಾಗಿ ನಿಮ್ಮೆಲ್ಲ ಚಿಂತನೆಯು ಪ್ರವಾಸವನ್ನು ಹೇಗೆ ಆರಂಭಿಸಬೇಕು, ಏನೆಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂಬುದರ ಸುತ್ತ ಸುತ್ತುತ್ತಿರುತ್ತದೆ. ನಾವು ಹಾಕಿಕೊಂಡಿರುವ ಉz್ದÉೀಶ ಸಫಲಗೊಳಿಸಲು ಏನೆಲ್ಲ ಮೂಲ ಪರಿಕರಗಳು, ಅಗತ್ಯವೆಂಬುದರೆಡೆಗೆ ನಮ್ಮೆಲ್ಲ ಗಮನ ಕೇಂದ್ರೀಕೃತವಾಗಿರುತ್ತದೆ.
 • ರೂ.15.00 ಕೋಟಿಗೂ ಅಧಿಕ ಮೊತ್ತ ರೂ.500 ಕೋಟಿಗಳವರೆಗಿನ ಯೋಜನಾ ಪ್ರಸ್ತಾವನೆಗಳನ್ನು ``ರಾಜ್ಯ ಮಟ್ಟದ ಏಕಗವಾಕ್ಷಿ ವಿಲೇವಾರಿ ಸಮಿತಿ’’(State Level Single Window Clearance Committee)ಯ ಮುಂದಿಡಲಾಗುವುದು.
 • ರೂ.500 ಕೋಟಿ ಮೀರಿದ ಯೋಜನೆಯ ಪ್ರಸ್ತಾವನೆಗಳನ್ನು ``ರಾಜ್ಯ ಉನ್ನತ ಮಟ್ಟದ ವಿಲೇವಾರಿ ಸಮಿತಿ’’ ()ಯ ಮುಂದಿಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.
  ರಾಜ್ಯದಲ್ಲಿ ಬಂಡವಾಳ ಹೂಡಿಕೆಯ ಪ್ರವರ್ತನಾ ಮತ್ತು ಪೂರಕ ಸಂಸ್ಥೆಯಾಗಿರುವ ರಾಜ್ಯ ಸರ್ಕಾರದ ``ಕರ್ನಾಟಕ ಉದ್ಯೋಗ ಮಿತ್ರ’’ ಅನುಮೋದಿತ ಉದ್ದಿಮೆಗಳಿಗೆ ಮಂಜೂರಾತಿ ದೊರಕಿಸುವುದು ಮತ್ತು ಮೂಲಸೌಲಭ್ಯಗಳನ್ನು ಮಂಜೂರು ಮಾಡುವ ಸಚಿವಾಲಯವಾಗಿದೆ.


ನಿಮ್ಮ ಉದ್ಯಮ : ವಾಣಿಜ್ಯ ಆರಂಭಿಸಲು ನೀವು ಮಾಡಬೇಕಾಗಿರುವುದು ಇಷ್ಟೇ. ಈ ಕೆಳಕಂಡ ಸರಳ ಮತ್ತು ವ್ಯವಸ್ಥಿತ ವಿಧಾನ ಅನುಸರಿಸಿ:

 • ನೋಂದಾಯಿಸಿ ಮತ್ತು ಹೊಸ ಹೂಡಿಕೆಗಾಗಿ ಅಥವಾ ಈಗಾಗಲೇ ಅನುಮೋದಿತ ಯೋಜನೆಗಳ ತಿದ್ದುಪಡಿಗಾಗಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿ.
 • ಬಳಕೆದಾರ ಮಾಹಿತಿಗಳೊಂದಿಗೆ ಲಾಗಿನ್ ಆಗಿ
 • ಮಾಹಿತಿಯನ್ನು ಭರ್ತಿ ಮಾಡಿ
 • ಡಿಜಿಟಲ್ ಸಹಿ ಮಾಡಿದ ದಾಖಲೆಗಳನ್ನು ಅಪ್‍ಲೋಡ್ ಮಾಡಿ.
 • ಶಾಸನಬದ್ಧ (ಪರಿಶೀಲನ) ಶುಲ್ಕ ಪಾವತಿಗಾಗಿ ವಿದ್ಯುನ್ಮಾನ ವಿಧಾನದಲ್ಲಿ ಪಾವತಿ ಮಾಡಿ.
 • ಅರ್ಜಿಯ ಸ್ಥಿತಿಗತಿಯನ್ನು ಆನ್‍ಲೈನ್ ಮೂಲಕ ಅನುಸರಿಸಿ:ಗುರುತಿಸಿ
 • ಸಲ್ಲಿಸಲ್ಪಟ್ಟಿರುವ ಅರ್ಜಿಯ ಪ್ರಗತಿಯನ್ನು ಇ-ಮೇಲ್ ಮುಖಾಂತರ ಜಾಗೃತಿ ಮತ್ತು ಎಸ್‍ಎಂಎಸ್ ಸ್ವೀಕರಿಸಿ.
 • ಸಂಶಯಗಳಿಗೆ ಪ್ರತಿಕ್ರಿಯೆ/ಸ್ಪಷ್ಟೀಕರಣ, ಹೆಚ್ಚುವರಿಯಾಗಿ ದಾಖಲೆಗಳ ಪ್ರತಿಗಳನ್ನು ಸಲ್ಲಿಸುವುದು, ಮುಂತಾದ ವಿಷಯಗಳ ಬಗ್ಗೆ ಆನ್‍ಲೈನ್ ಮೂಲಕ ವ್ಯವಹರಿಸಿ.
 • ಅನುಮೋದನಾ ಪಟ್ಟಿ ವಿದ್ಯುನ್ಮಾನ ಪ್ರತಿಗಳನ್ನು ಪಡೆದುಕೊಳ್ಳಿ.
ನೋಂದಣಿಯೊಂದಿಗೆ ಆರಂಭಿಸಿ, ಕರ್ನಾಟಕ ಉದ್ಯೋಗ ಮಿತ್ರ ನೀಡುವ ಸೇವೆಗಳನ್ನು ಪಡೆದುಕೊಳ್ಳಿ. ಹಾಗೇ ಹೆಚ್ಚಿನ ಮಾಹಿತಿಗಾಗಿ `ಎಫ್‍ಎಕ್ಯೂ’ ವಿಭಾಗವನ್ನು ಪ್ರವೇಶಿಸಿ.

ಇನ್ನೂ ಹೆಚ್ಚಿನ ಮಾರ್ಗದರ್ಶನಕ್ಕಾಗಿ `ಇಲ್ಲಿ ಕ್ಲಿಕ್ ಮಾಡಿ’ ‘ಕರ್ನಾಟಕ ಉದ್ಯೋಗ ಮಿತ್ರ’ದ ಅಧಿಕೃತ ವೆಬ್‍ಸೈಟ್ http://investkarnataka.gov.in/ಗೆ ಭೇಟಿ ನೀಡಿ.