ಕರ್ನಾಟಕ ಉದ್ಯೋಗ ಮಿತ್ರ ಕುರಿತು

``ಕರ್ನಾಟಕ ಉದ್ಯೋಗ ಮಿತ್ರ’’ವು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಆಶ್ರಯದಡಿ ರಚಿತವಾದ ಕರ್ನಾಟಕ ಸರ್ಕಾರದ ಒಂದು ಸಂಸ್ಥೆ. ಹೂಡಿಕೆದಾರರು ಬಂಡವಾಳ ಹೂಡಲು ಪ್ರವರ್ತಿಸುವುದು, ಪ್ರೋತ್ಸಾಹಿಸುವುದು ಹಾಗೂ ಸಹಕರಿಸಲು ``ಕರ್ನಾಟಕ ಉದ್ಯೋಗ ಮಿತ್ರ’’ ರಾಜ್ಯದ ಮೊದಲ ಹೆಜ್ಜೆ.

ಬಂಡವಾಳ ಹೂಡಿಕೆಗೆ ಮುಂದಾಗುವುದೆಂದರೆ ಅತ್ಯಂತ ಮಹತ್ವಪೂರ್ಣ ಪ್ರಯಾಣಕ್ಕೆ ಸಿದ್ಧತೆ ಮಾಡುವಷ್ಟೇ ಪ್ರಮುಖವಾದುದು. ಸಹಜವಾಗಿ ನಿಮ್ಮೆಲ್ಲ ಚಿಂತನೆಯು ಪ್ರವಾಸವನ್ನು ಹೇಗೆ ಆರಂಭಿಸಬೇಕು, ಏನೆಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂಬುದರ ಸುತ್ತ ಸುತ್ತುತ್ತಿರುತ್ತದೆ. ನಾವು ಹಾಕಿಕೊಂಡಿರುವ ಉz್ದÉೀಶ ಸಫಲಗೊಳಿಸಲು ಏನೆಲ್ಲ ಮೂಲ ಪರಿಕರಗಳು, ಅಗತ್ಯವೆಂಬುದರೆಡೆಗೆ ನಮ್ಮೆಲ್ಲ ಗಮನ ಕೇಂದ್ರೀಕೃತವಾಗಿರುತ್ತದೆ.

ಒಂದು ಸುವ್ಯವಸ್ಥಿತ ರೀತಿಯಲ್ಲಿ ರಚಿತವಾದ ಯೋಜನೆಯು ನಿಖರ ಮತ್ತು ಬಳಕೆದಾರ ಸ್ನೇಹಿ ಮಾರ್ಗಸೂಚಿಗಳೊಂದಿಗೆ ಯಶಸ್ವಿಯಾಗಿ ಉz್ದÉೀಶಿತ ಗುರಿ ತಲುಪಲು, ಸಾಗಬೇಕಾದ ಸ್ಪಷ್ಟ ದಾರಿ ಮುಂತಾದ ನಿಮ್ಮ ಅಗತ್ಯತೆಗಳನ್ನು ``ಕರ್ನಾಟಕ ಉದ್ಯೋಗ ಮಿತ್ರ’’ದಲ್ಲಿ ನಾವು ಅರಿತುಕೊಂಡಿರುತ್ತೇವೆ. ಕಳೆದ 15 ವರ್ಷಗಳಿಂದ ಇಲ್ಲಿ ನಾವು ಕೋಟ್ಯಂತರ ಹೂಡಿಕೆದಾರರು ಅತ್ಯಂತ ಸೂP್ಷÀ್ಮ ಮತ್ತು ಮಹತ್ವಪೂರ್ಣ ಸಲಹೆ ಮತ್ತು ಮಾರ್ಗದರ್ಶನ ನೀಡುತ್ತಿz್ದÉೀವೆ.
ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಮಾಡಲು ಅಥವಾ ಉದ್ಯಮ ಆರಂಭಿಸಲು ಸಂಪರ್ಕಿಸಬಹುದಾದ ಏಕಮೇವ ಸಂಸ್ಥೆಯಾಗಿ ``ಕರ್ನಾಟಕ ಉದ್ಯೋಗ ಮಿತ್ರ’’ ಪರಿಗಣಿಸಲ್ಪಟ್ಟಿದೆ. ಒಂದು ಕೇಂದ್ರೀಯ ಸಂಸ್ಥೆಯಾಗಿ (ಟಿoಜಚಿಟ ಚಿgeಟಿಛಿಥಿ) ನಮ್ಮ ಪಾತ್ರ ಬಂಡವಾಳ ಹೂಡಿಕೆಗೆ ಅನುಕೂಲ ಮಾಡಿಕೊಡುವುದು, ಆರಂಭಿಕ ಕ್ರಮಗಳನ್ನು ಕಾರ್ಯಗತಗೊಳಿಸಿ ಉದ್ದಿಮೆಯ ಪ್ರತಿ ಹಂತವೂ ನಿರಾಯಾಸವಾಗಿ ಪಲ್ಲಟಗೊಳ್ಳುತ್ತ ಅಂದರೆ ಹೂಡಿಕೆಗೆ ಪ್ರಸ್ತಾವನೆ ಸ್ವೀಕರಿಸುವುದರಿಂದ ಹಿಡಿದು ಯೋಜನೆಯು ಅನುಷ್ಠಾನಗೊಳ್ಳುವವರೆಗಿನ ಎಲ್ಲ ಮಜಲುಗಳು ಮುಂದೆ ಸಾಗುವಂತೆ ನೋಡಿಕೊಳ್ಳುವುದು. ರಾಜ್ಯದಲ್ಲಿ ಬಂಡವಾಳ ಹೂಡಿಕೆಯ ಪ್ರವರ್ತನಾ ಮತ್ತು ಪೂರಕ ಸಂಸ್ಥೆಯಾಗಿರುವ ರಾಜ್ಯ ಸರ್ಕಾರದ ``ಕರ್ನಾಟಕ ಉದ್ಯೋಗ ಮಿತ್ರ’’ ಅನುಮೋದಿತ ಉದ್ದಿಮೆಗಳಿಗೆ ಮಂಜೂರಾತಿ ದೊರಕಿಸುವುದು ಮತ್ತು ಮೂಲಸೌಲಭ್ಯಗಳನ್ನು ಮಂಜೂರು ಮಾಡುವ ಸಚಿವಾಲಯವಾಗಿದೆ.

ಇನ್ನೂ ಹೆಚ್ಚಿನ ಮಾರ್ಗದರ್ಶನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ ‘ಕರ್ನಾಟಕ ಉದ್ಯೋಗ ಮಿತ್ರ’ದ ಅಧಿಕೃತ ವೆಬ್‍ಸೈಟ್‍ಗೆ ಭೇಟಿ ನೀಡಿ.