ಹೊಸ ಪ್ರಸ್ತಾವನೆಗಳಿಗೆ ಅರ್ಜಿ ಸಲ್ಲಿಕೆ

ವಿವರಣೆ:

ಹೊಸ ಹೂಡಿಕೆಗಳಿಗೆ ಅನುಕೂಲ: ಅವಕಾಶ ಒದಗಿಸಲು ಏಕಸ್ಥಾನ (siಟಿgಟe ಠಿoiಟಿಣ) ಅನುಮೋದನಾ ಸಮಿತಿ ರಚನೆ: ಅಂದರೆ,

 • ರಾಜ್ಯ ಉನ್ನತ ಮಟ್ಟದ ಅನುಮೋದನಾ ಸಮಿತಿ: ಸನ್ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ ಇವರ ಅಧ್ಯP್ಷÀತೆಯ ರೂ.100 ಕೋಟಿ ಮತ್ತು ಮೇಲ್ಪಟ್ಟ ಮೊತ್ತದ ಯೋಜನೆಗಳಿಗೆ ಪರಿಶೀಲಿಸಿ ಮತ್ತು ಅನುಮೋದನೆ ನೀಡುವುದು.
 • ರಾಜ್ಯಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ: ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಅಧ್ಯP್ಷÀತೆಯಲ್ಲಿನ ಈ ಸಮಿತಿಯು ರೂ.15.00 ಕೋಟಿಗೂ ಅಧಿಕ ಮತ್ತು ರೂ.100 ಕೋಟಿ ಮೊತ್ತದೊಳಗಿನ ಯೋಜನೆಗಳ ಪರಿಶೀಲನೆ ಮತ್ತು ಅನುಮೋದನೆ ನೀಡುವುದು
 • ಈಗ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿಯು `ಕೆಐಎಡಿಬಿ’ ಅಡಿ ಬರುವ ಬೆಂಗಳೂರು (ನ), ಬೆಂಗಳೂರು (ಗ್ರಾ), ಚಿಕ್ಕಬಳ್ಳಾಪುರ, ರಾಮನಗರ, ಕೋಲಾರ ಮತ್ತು ತುಮಕೂರು ಜಿ¯್ಲÉಗಳಿಗೆ ಸಂಬಂಧಿಸಿದ ರೂ.15 ಕೋಟಿಗಳಿಗಿಂತಲೂ ಕಡಿಮೆ ಮೊತ್ತದ ಯೋಜನೆಗಳನ್ನು ಪರಿಶೀಲಿಸಿ ಅನುಮೋದನೆ ನೀಡುವುದು (ಯೋಜನೆಗೆ ಗರಿಷ್ಠ 2 ಎಕರೆ ಜಮೀನಿಗೆ ಮಾತ್ರ ಮಂಜೂರಾತಿ ನೀಡುವುದು)..
 • ಜಿ¯್ಲÁ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ: ಸಂಬಂಧಪಟ್ಟ ಜಿ¯್ಲÉಯ ಜಿ¯್ಲÁಧಿಕಾರಿಗಳ ಅಧ್ಯP್ಷÀತೆಯಲ್ಲಿನ ಈ ಸಮಿತಿಯು ರೂ.15 ಕೋಟಿಯವರೆಗೆ, ಹೂಡಿಕೆ ಮಾಡುವ ಯೋಜನೆಗಳ ಪರಿಶೀಲನೆ ಮಾಡಿ ಮಂಜೂರಾತಿ ನೀಡುವುದು.
 • `ಕರ್ನಾಟಕ ಉದ್ಯೋಗ ಮಿತ್ರ’ ಸಂಸ್ಥೆಯನ್ನು ರಾಜ್ಯ ಮಟ್ಟದ ಮತ್ತು ಜಿ¯್ಲÁ ಮಟ್ಟದಲ್ಲಿ ಯೋಜನೆಗಳಿಗೆ ಹೂಡಿಕೆಗೆ ಪ್ರೋತ್ಸಾಹದಾಯಕ ಚಟುವಟಿಕೆ ಹಮ್ಮಿಕೊಳ್ಳಲು ಕೇಂದ್ರೀಯ ಸಂಸ್ಥೆಯನ್ನಾಗಿ ನೇಮಿಸಲಾಗಿದೆ.
 • ಪ್ರವೇಶ ಹಂತದಲ್ಲಿ ಅಗತ್ಯವಿರುವ ಅರ್ಜಿ ನಮೂನೆಗಳನ್ನು ಸಲ್ಲಿಸುವಾಗ ಕಂಡು ಬರುವ ಅರ್ಜಿಗಳ ಸಂಖ್ಯೆ ಮತ್ತು ಪುನರಾವರ್ತನೆ (ಜuಠಿಟiಛಿಚಿಣioಟಿ) ಯನ್ನು ಕಡಿಮೆಗೊಳಿಸುವುದಕ್ಕಾಗಿ ``ಸಂಯುಕ್ತ ಅರ್ಜಿ ನಮೂನೆ’’ (ಅಂಈ) ಅಳವಡಿಕೆ.
 • ಉದ್ದಿಮೆದಾರರಿಗೆ ಅನುಮೋದನಾ ಪತ್ರ ನೀಡುವುದು ಮತ್ತು ಲಾಭ (ಪ್ರಯೋಜನ)ಗಳ ಮಂಜೂರಾತಿಗಾಗಿ ವಿವಿಧ ಇಲಾಖೆಗಳು ಮತ್ತು ಪ್ರಾಧಿಕಾರಗಳು ಅಂಗೀಕರಿಸುವಂತೆ ಉದ್ದಿಮೆದಾರರು ನೀಡುವ ಸ್ವಯಂದೃಢೀಕರಣ ಪ್ರಮಾಣ ಪತ್ರದ ಅಳವಡಿಕೆ.

ಪೂರ್ವಾರ್ಹತೆಗಳು:

 • ಅರ್ಜಿ ಭರ್ತಿ ಮಾಡಲು ಸಹಾಯದ ಅವಶ್ಯಕತೆಯಿದ್ದಲ್ಲಿ: “Registration of Intention to Investment” ಭರ್ತಿ ಮಾಡಿ ಮತ್ತು ಸಲ್ಲಿಸಿ. ಕುಮ್ ಅಥವಾ ಜಿ¯್ಲÁ ಕೈಗಾರಿಕಾ ಕೇಂದ್ರದ ಅಧಿಕಾರಿಯು ನಿಮಗೆ ಸಹಯೋಗ ನೀಡಿ ಅಗತ್ಯ ನೆರವು ನೀಡುವುದು.
 • ಯೋಜನಾ ಪ್ರಸ್ತಾವನೆಯು ಆನ್‍ಲೈನ್ ಮೂಲಕ ಅರ್ಜಿ ನಮೂನೆ ಭರ್ತಿ ಮಾಡಲು ಸಿದ್ಧವಾಗಿದ್ದಲ್ಲಿ ಪ್ರಸ್ತಾಪದಾರರು ಲಾಗ್‍ಇನ್ ಆಗಿ ಅಡಿeಚಿಣe ಓeತಿ/Useಡಿ ಗೆ ಕ್ಲಿಕ್ ಮಾಡಿ  ಗುರುತಿನ ಚಿಹ್ನೆ ಮತ್ತು ಪಾಸ್‍ವರ್ಡ್ ಪಡೆದುಕೊಳ್ಳಬೇಕು ಮತ್ತು ಅಗತ್ಯ ಮಾಹಿತಿಯನ್ನು ಒದಗಿಸಬೇಕು.
 • ಒಂದು ಬಾರಿ ಪ್ರಸ್ತಾಪದಾರರು ಬಳಕೆದಾರರ ಗುರುತಿನ ಚಿಹ್ನೆ (Useಡಿ-Iಜ) ಸೃಜಿಸಿದ ನಂತರ ಅವರು ಲಾಗ್‍ಇನ್ ಆಗಿ ಅರ್ಜಿ ನಮೂನೆಯನ್ನು ನೋಡಬಹುದು ಮತ್ತು ಅರ್ಜಿ ನಮೂನೆಯನ್ನು ಭರ್ತಿ ಮಾಡಬಹುದು.
 • ಶುಲ್ಕ ಪಾವತಿಯನ್ನು ಆನ್‍ಲೈನ್ ಮೂಲಕ ಮಾಡುವುದು ಮತ್ತು ಎಲ್ಲ ದಾಖಲೆಗಳನ್ನು ಅಪ್‍ಲೋಡ್ ಮಾಡಿ ಅರ್ಜಿಯನ್ನು ಸಲ್ಲಿಸುವುದು.
 • ಪ್ರಸ್ತಾಪದಾರರು ಅರ್ಜಿಯ ಸ್ಥಿತಿಗತಿ/ಪ್ರಗತಿಯ ಹಂತವನ್ನು ಆನ್‍ಲೈನ್‍ನಲ್ಲಿ ಗುರುತಿಸಬಹುದು.
 • ಅರ್ಜಿ ಸಲ್ಲಿಕೆಗೆ ಡಿಜಿಟಲ್ ಸಹಿಯನ್ನು ಅತ್ಯಂತ ಭದ್ರತೆ ಮತ್ತು ಅಧಿಕೃತೆಯೊಂದಿಗೆ ಕಡ್ಡಾಯಗೊಳಿಸಿದೆ.
 • ಅರ್ಜಿದಾರರು ಡಿಜಿಟಲ್ ಸಹಿ ವಿನ್ಯಾಸವನ್ನು ಅರ್ಜಿ ಸಲ್ಲಿಸಲು/ದಾಖಲೆಗಳನ್ನು ಅಪ್‍ಲೋಡ್ ಮಾಡುವುದಕ್ಕಾಗಿ ಹೊಂದಿರಬೇಕು.

ಕಡ್ಡಾಯವಾಗಿ ಸಲ್ಲಿಸಬೇಕಾದ ದಾಖಲೆಗಳ ಪಟ್ಟಿಗಾಗಿ ಇಲ್ಲಿ ಕ್ಲಿಕ್ ಮಾಡಿ..

ಖಜಿಟಲ್ ಸಹಿ ಪ್ರಮಾಣ ಪತ್ರ ನೀಡುವ ಪ್ರಮಾಣೀಕೃತ ಪ್ರಾಧಿಕಾರ, ಡಿಜಿಟಲ್ ಸಹಿ ಪ್ರಮಾಣ ಪತ್ರದ ಬೆಲೆ ಕುರಿತು ಹೆಚ್ಚಿನ ಮಾಹಿತಿಗಾಗಿ  ಇಲ್ಲಿ ಕ್ಲಿಕ್ ಮಾಡಿ.

ಪಾವತಿ ವಿವರಗಳು: span>

ಅರ್ಜಿ ಪರಿಶೀಲನ ಶುಲ್ಕದ ಮೊತ್ತವು ಕೆಳಕಂಡ ಯೋಜನಾ ಹೂಡಿಕೆ ಮೌಲ್ಯದ ಮೇಲೆ ನಿಗದಿಗೊಳಿಸಿದೆ.

ಕ್ರ.ಸಂ. ಯೋಜನಾ ಮೊತ್ತ ಸಾಮಾನ್ಯ ಪ್ರವರ್ಗದ ಹೂಡಿಕೆದಾರರು ತೆರಿಗೆ ಸಮೇತ ಪ.ಜಾ/ಪ.ಪಂ/ತೆರಿಗೆ ಸಮೇತ(ರೂ.ಗಳಲ್ಲಿ)
1. ರೂ.15 ಕೋಟಿಗೂ ಅಧಿಕ ಮತ್ತು ರೂ.30 ಕೋಟಿವರೆಗೆ Rs.23,600   Rs.11,800  
2. ರೂ.30 ಕೋಟಿಗೂ ಅಧಿಕ ಮತ್ತು ರೂ.50 ಕೋಟಿವರೆಗೆ Rs.47,200  Rs.23,600  
3. ರೂ.50 ಕೋಟಿಗೂ ಅಧಿಕ ಮತ್ತು ರೂ.100 ಕೋಟಿವರೆಗೆ Rs.1,18,000  Rs.59,000  
4. ರೂ.100 ಕೋಟಿಗೂ ಅಧಿಕ ಮತ್ತು ರೂ.250 ಕೋಟಿವರೆಗೆ Rs.2,36,000  Rs.1,18,000  
5. ರೂ.250 ಕೋಟಿಗೂ ಅಧಿಕ ಮತ್ತು ರೂ.500 ಕೋಟಿವರೆಗೆ Rs.3,54,000  Rs.1,77,000  
6. ರೂ.500 ಕೋಟಿಗೂ ಅಧಿಕ ಮತ್ತು ರೂ.1000 ಕೋಟಿವರೆಗೆ Rs.5,31,000  Rs.2,65,500  
7. ರೂ.1000 ಕೋಟಿಗೂ ಅಧಿಕ ಮತ್ತು ರೂ.5000 ಕೋಟಿವರೆಗೆ Rs.8,85,000  Rs.4,42,500  
8. ರೂ.5000 ಕೋಟಿಗೂ ಅಧಿಕ Rs.17,70,000  Rs.8,85,000  

ಹೂಡಿಕೆದಾರರು ಪೆÇೀರ್ಟಲ್‍ನಲ್ಲಿ ಹಣ ಪಾವತಿ ಮಾಡಲು ಈ ಕೆಳಗೆ ತಿಳಿಸಿರುವ ಯಾವುದೇ ಅವಕಾಶಗಳನ್ನು ಆಯ್ಕೆ ಮಾಡಿಕೊಳ್ಳಬಹುದು

ತತ್P್ಷÀಣ ಪಾವತಿ ಆಯ್ಕೆ ಅವಕಾಶಗಳು

• ಕ್ರೆಡಿಟ್ ಕಾರ್ಡ್  
•ನೇರ ಡೆಬಿಟ್

ಮುಂದೂಡಿದ ಪಾವತಿ ಆಯ್ಕೆ ಅವಕಾಶಗಳು

• ನ್ಯಾಷನಲ್ ಎಲೆಕ್ಟ್ರಾನಿಕ್ ಫಂಡ್ ಟ್ರಾನ್ಸ್‍ಫರ್ ((ಎನ್‍ಇಎಫ್‍ಟಿ))
ಆರ್‍ಟಿಜಿಎಸ್

ಎನ್‍ಇಎಫ್‍ಟಿ ಮತ್ತು ಆರ್‍ಟಿಜಿಎಸ್‍ಗೆ ಬ್ಯಾಂಕ್ ವಿವರಗಳು

ಬ್ಯಾಂಕಿನ ಹೆಸರು: ವಿಜಯಾ ಬ್ಯಾಂಕ್ 
ಶಾಖೆಯ ಹೆಸರು: ರೇಸ್‍ಕೋರ್ಸ್ ರಸ್ತೆ ಶಾಖೆ
ಕುಮ್ ಅಕೌಂಟ್ ನಂ.: 117801010024178  
ಐಎಫ್‍ಎಸ್‍ಸಿ ಕೋಡ್: : VIJB0001178

ಅರ್ಜಿ ಸಲ್ಲಿಸಿದ ಪ್ರಸ್ತಾವನೆಗಳ ಪ್ರಕ್ರಿಯಾ ಕ್ರಮಗಳು:

 • ಕುಮ್/ಡಿಐಸಿಯು ಅರ್ಜಿ ನಮೂನೆಯನ್ನು ಪ್ರಕ್ರಿಯೆಗೊಳಿಸುವುದು/ಪರಿಶೀಲಿಸುವುದು ಮತ್ತು ಯೋಜನೆಗೆ ಹೂಡಿರುವ ಬಂಡವಾಳದ ಪ್ರಮಾಣದ ಅನುಸಾರವಾಗಿ ಆಯಾ ಅರ್ಜಿಗಳನ್ನು ಎಲ್‍ಎಲ್‍ಎಸ್‍ಡಬ್ಲ್ಯೂಸಿಸಿ ಅಥವಾ ಎಸ್‍ಎಚ್‍ಎಲ್‍ಸಿಸಿ ಅಥವಾ ಡಿಎಲ್‍ಎಸ್‍ಡಬ್ಲ್ಯೂಸಿಸಿ ಮುಂದೆ ಇಡಲಾಗುವುದು.
 • ಪರಿಶೀಲನೆ ಕ್ರಮದ ಅವಧಿಯಲ್ಲಿ ಯೋಜನಾ ಪ್ರಸ್ತಾವನೆ ಆಧಾರದ ಮೇಲೆ ಅಧಿಸೂಚನೆಯ ಮೂಲಕ ಹೆಚ್ಚವರಿ ಅಂಕಿ ಅಂಶಗಳು ಅಥವಾ ದಾಖಲೆ ಪತ್ರಗಳನ್ನು ಇಲಾಖೆಯು ಕೇಳಬಹುದಾಗಿರುತ್ತದೆ. ಸೃಷ್ಟಿಸಲಾಗಿರುವ ಲಾಗಿನ್ ಐಡಿ ಬಳಸಿ ಈ ವಿವರವನ್ನು ಅಪ್‍ಲೋಡ್ ಮಾಡಬಹುದು.
 • ಜಮೀನಿನ ಪರಿಶೋಧನೆ ಸಭೆ/ಡಿಎಲ್‍ಎಸ್‍ಡಬ್ಲ್ಯೂಸಿಸಿ/ಎಸ್‍ಎಲ್‍ಎಸ್‍ಡಬ್ಲ್ಯೂಸಿಸಿ ಸಭೆಗೆ ಹಾಜರಾಗಲು ಹೂಡಿಕೆದಾರರುಗಳಿಗೆ ಎಸ್‍ಎಂಎಸ್ ಮತ್ತು ಇ-ಮೇಲ್ ಸೂಚನೆ ನೀಡಬಹುದು. ಇವರು ಯೋಜನೆಯ ವೈಶಿಷ್ಟ್ಯತೆ ಬಗ್ಗೆ ಸಭೆಯಲ್ಲಿ ನಿರೂಪಣೆ ಮಾಡಬೇಕಾಗುವುದು.
 • ಡಿಎಲ್‍ಎಸ್‍ಡಬ್ಲ್ಯೂಸಿಸಿ/ಎಸ್‍ಎಲ್‍ಎಸ್‍ಡಬ್ಲ್ಯೂಸಿಸಿ/ಎಸ್‍ಎಚ್‍ಎಲ್‍ಸಿಸಿಯಿಂದ ಯೋಜನಾ ಪ್ರಸ್ತಾವನೆಗೆ ಒಮ್ಮೆ ಒಪ್ಪಿಗೆ ದೊರೆತರೆ ಆಗ ಯೋಜನಾ ಪ್ರತಿಪಾದಕರು ಇ-ಉದ್ಯಮಿ ವೆಬ್‍ಸೈಟ್‍ಗೆ ಲಾಗ್‍ಆನ್ ಆಗಬಹುದು ಮತ್ತು ಆನ್‍ಲೈನ್ ಅರ್ಜಿ ಆಯ್ಕೆ ಮಾಡಿ ನಿಗದಿತ ದಾಖಲೆಗಳೊಂದಿಗೆ ಸಂಬಂಧಪಟ್ಟ ಕೆಐಎಡಿಬಿ, ಕೆಎಸ್‍ಎಸ್‍ಐಡಿಸಿ, ಕೆಎಸ್‍ಪಿಸಿಬಿ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಇಂಧನ ಇಲಾಕೆ, ಕಾರ್ಖಾನೆ ಮತ್ತು ಬಾಯ್ಲರ್ ಮತ್ತಿತರ ಇಲಾಖೆಗಳಿಗೆ ಅನುಮೋದನೆ ಅಥವಾ ಮಂಜೂರಾತಿ ಪಡೆಯಲು ಸಲ್ಲಿಸಬೇಕು.
 • • ಈ ಕುರಿತು ಕುಮ್/ಡಿಐಸಿ ಸಂಬಂಧಪಟ್ಟ ಇಲಾಖೆಗಳು/ಸಂಸ್ಥೆಗಳನ್ನು ಹೂಡಿಕೆದಾರರ ಪರವಾಗಿ ಅನುಸರಣೆಯನ್ನು ಮಾಡುವುದು ಮತ್ತು ಅಗತ್ಯ ಅನುಮೋದನೆ ಅಥವಾ ಮಂಜೂರಾತಿ ಪಡೆದುಕೊಳ್ಳಲು ಸಹಯೋಗ ನೀಡುವುದು.

ಪ್ರಮುಖ ಸಂಪರ್ಕಗಳು:

ವ್ಯವಸ್ಥಾಪಕ ನಿರ್ದೇಶಕರು,

ಕರ್ನಾಟಕ ಉದ್ಯೋಗ ಮಿತ್ರ,

3ನೇ ಮಹಡಿ, ಖನಿಜ ಭವನ (ದಕ್ಷಿಣ ಭಾಗ),

ನಂ.49, ರೇಸ್‍ಕೋರ್ಸ್ ರಸ್ತೆ, ಬೆಂಗಳೂರು-1, ಭಾರತ

ದೂರವಾಣಿ: 91-80-22282392/22285659/22286632, ಫ್ಯಾಕ್ಸ್: 91-80-22266063;
ಇ-ಮೇಲ್: md@kumbangalore.com
          Karnatakaudyogamitra@gmail.com
          crmenquiries@kumbangalore.com

           ಡಿಐಸಿ ಸಂಪರ್ಕ ವಿವರಗಳು:

ಸೂಚನೆ: : ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳಿಗೆ ಶುಲ್ಕ ಪಾವತಿ ರಿಯಾಯಿತಿ ಕುರಿತು ಮತ್ತು ಸೌರ/ಪವನ ವಿದ್ಯುತ್ ಯೋಜನೆಗಳಿಗೆ ಸಂಬಂಧಿಸಿದಂತೆ ದಯಮಾಡಿ   ಇಲ್ಲಿ ಕ್ಲಿಕ್ ಮಾಡಿ.